ರಾಮಾಚಾರಿಗೆ ಚಾಮಯ್ಯ ಮೇಷ್ಟ್ರು ಕಂಬನಿ... |
|
|
|
ಮೈಸೂರು: ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ನಟ ಡಾ.ವಿಷ್ಣುವರ್ಧನ್ ಅವರ ಅಕಾಲಿಕ ನಿಧನಕ್ಕೆ ಖ್ಯಾತ ಪೋಷಕ ನಟ ಕೆ.ಎಸ್.ಅಶ್ವಥ್ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಬುಧವಾರ ಮುಂಜಾನೆಯೇ ವಿಷ್ಣುವರ್ಧನ್ ಸಾವಿನ ಸುದ್ದಿ ತಿಳಿದು ದುಃಖಿತರಾದ ಅಶ್ವಥ್ ‘ವಿಷ್ಣುವರ್ಧನ್ ಕನ್ನಡ ಚಿತ್ರರಂಗ ಕಂಡ ಸಂಭಾವಿತ ನಟ. ತನ್ನ ಜೊತೆ ಅಭಿನಯಿಸುವ ಕಲಾವಿದರೊಂದಿಗೆ ಚೆನ್ನಾಗಿ ನಡೆದುಕೊಳ್ಳುತ್ತಿದ್ದರು. ಇತರೆ ಕಲಾವಿದರ ಬಗ್ಗೆಯೂ ಗೌರವ ಇಟ್ಟುಕೊಂಡಿದ್ದರು’ ಎಂದು ಭಾವುಕರಾಗಿ ಹೇಳಿದರು.
‘ನಾನು ಮತ್ತು ವಿಷ್ಣುವರ್ಧನ್ ಪ್ರಥಮ ಬಾರಿಗೆ 37 ವರ್ಷಗಳ ಹಿಂದೆ ನಾಗರಹಾವು ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದೆವು. ಇಲ್ಲಿಯತನಕ 30 ರಿಂದ 35 ಸಿನಿಮಾಗಳಲ್ಲಿ ಆತನೊಂದಿಗೆ ಅಭಿನಯಿಸಿದ್ದೇನೆ.
ಆತ ರಾಮಾಚಾರಿಯಾಗಿ, ನಾನು ಚಾಮಯ್ಯ ಮೇಷ್ಟ್ರಾಗಿ ಅಭಿನಯಿಸಿದ್ದೆವು. ಈ ಚಿತ್ರ ಇಬ್ಬರಿಗೂ ಒಳ್ಳೆಯ ಹೆಸರು ತಂದುಕೊಟ್ಟಿತು ಎಂದು ನೆನಪಿಸಿಕೊಂಡರು.
|
No comments:
Post a Comment